ಕಾಯಬೇಕಮ್ಮ ಶ್ರೀ ತುಳಸಿ ll ಮಾಯಾ ರಮಣನ ಮೋಹದ ಅರಸಿ ಕಾಯಬೇಕಮ್ಮ ಶ್ರೀ ತುಳಸಿ ll ಹರಿಯ ಸುಕಂಠದಿ ಸರಸದಿ ಮೆರೆವಳೆ ll ಪರಿಹರಿಸೆನ್ನಯ ಪಾಪಗಳ ll ಹರಿಯ ಷಣ್ಮ ಹಿಷಿಯ ರೊಳಗುತ್ತಮಳು ನೀ ll ಸಿರಿ ಜಾಂಬವತಿ ಎಂದೆನಿಸಿ ಕೊಂಬುವಳೇ ll1ll ಶೇಷ ಬಲರಾಮರ ಸಮಳೆಂದೆನಿಪಳೆ ll ದೋಷರಾಶಿಗಳ ಕಳೆವವಳೇ ll ಈ ಸಮಯದಲೆನ್ನ ಘಾಸಿ ಗೊಳಿಸದಲೇ ವಾದುದೇವಗೆ ಹೇಳಿ ಪೋಷಿಸು ತಾಯೆ ll2ll ಶ್ರೀ ಧನ್ವಂತರಿ ಹರ್ಷ ಬಿಂದುಗಳಿಂದ ಈ ಧರೆಯೊಳು ನೀ ತರುವಾಗಿ […]
Month: December 2019
Belagire aaruthiya sri thulasige
ಬೆಳಗಿರೆ ಆರುತಿಯ ಶ್ರೀ ತುಳಸಿಗೆ ll ಬೆಳಗಿರೆ ಆರುತಿಯ llಪ ll ಬೆಳಗಿರೆ ಆರುತಿ ಶ್ರೀ ತುಳಸಿದೇವಿಗೆ ನಿತ್ಯ ಲಲನೆಯರೆಲ್ಲ ಮಂಗಳ ಪಾಡುತ ll ಅ. ಪ ll ಸುಧೆಯ ಕಲಶದೊಳು ಮಧುವೈರಿ ನಯನದ ಮುದಜಲ ಬೀಳಲು ಉದುಭವಿಸಿದಳೆಂದು ll1ll ದರುಶನ ಮಾತ್ರದಿ ದುರಿತಗಳೋಡಿಸಿ ll ಸ್ಥಿರವಾದ ಸೌಭಾಗ್ಯ ಕರುಣಿಸುವಳೆಂದು ll2ll ಇಳೆಯೊಳು ಕಾರ್ಪರನಿಲಯ ಶ್ರೀ ನರಹರಿ ಒಲುಮೆಯ ಪಡೆದ ಶ್ರೀ ತುಳಸಿ ದೇವಿಗೆ ಬೇಗ ll3ll *****
Toravva tulasi haripada
ತೋರವ್ವ ತುಳಸಿ ಹರಿಪದ ತೋರವ್ವ ತುಳಸಿ ll ಪ ll ಹದಿನಾರು ಸಾವಿರ ಸುದತೆಯರಿರಲು ll ಮುದದಿ ನಿನ್ನ ಮದುವ್ಯಾದ ಕೃಷ್ಣನನು ll1ll ಅಷ್ಟ ಮಹಿಷಿಯರು ಶಿಸ್ತಾಗಿರಲು ll ಇಷ್ಟ ದಿಂದ ನಿನ್ನ ಬಿಟ್ಟಿರದವನ ll2ll ಅಡವಿಯಲಿ ನೀ ಗಿಡವಾಗಿರುತಿರೆ ll ಮಡದಿಯೆಂದು ಕೈ ಪಿಡಿದು ತಂದವನ ll3ll ಕ್ಷೀರ ಶರಧಿಯಿಂ ತೋರಿದ ಅಮೃತದ ಸಾರ ಬಿಂದು ಎಂದ್ವರಿಸಿದ ಹರಿಯನು ll4ll ಎದೆಯನು ಲಕ್ಷುಮಿ ಸದನವ ಗೈದಿರೆ ll ಮುದದಿ ನಿನ್ನ ಕಂಠದಲಿ ಧರಿಸಿಹನ ll5ll ಕಾಯಜಪಿತನ […]
Thulasi deviye namisi beduve
ತುಳಸಿ ದೇವಿಯೇ ನಮಿಸಿ ಬೇಡುವೆ ll ಪ ll ನಿಮ್ಮ ಪಾದ ಒಲುಮೆಯಿಂದ ಭಜಿಸಿ ಪಾಡುವೆ ll ಅ. ಪ ll ಅಲವ ಭೋದರ ಹೃದಯವಾಸ ll ಸುಲಭ ನಮ್ಮ ಹರಿಯ ರೂಪ ll ಫಲಿಸಿ ಎನ್ನ ಹೃದಯದಲ್ಲಿ ಗೆಲಿಸು ಎನ್ನ ಭವದ ತಾಪ ll 1ll ಹರಿಯ ನಯನ ಧಾರೆ ಸಂಭವೇ ll ಕಾಯೆ ತಾಯೆ ಸುಜನ ಪ್ರಿಯಳೇ ll ವರಸುವರ್ಣ ಪುಷ್ಪ ದಮಿತ ಎಲ್ಲ ನಮಿಸಿ ಬೇಡಿದಾರು ll ಹರಿಯು ಒಪ್ಪ ನಿಮ್ಮ ದಳ […]
Pooje maadona bannire sri thulasiya
ಪೂಜೆ ಮಾಡೋಣ ಬನ್ನಿರೇ ll ಶ್ರೀ ತುಳಸಿಯ ll ಪೂಜೆ ಮಾಡೋಣ ಬನ್ನಿರೇ ll ಪ ll ಪೂಜೆ ಮಾಡೋಣ ಬನ್ನಿ ಲಾಜ ದೂರ್ವಗಳಿಂದ ll ಜಾಜಿ ಮಲ್ಲಿಗೆ ರಾಜೀವ ಪುಷ್ಪಗಳಿಂದ ll ಅ. ಪ ll ಹರದೇ ಶ್ರೀ ತುಳಸಿಗೆ ಸಾರಾವಳಿಯ ಉಡಿಸಿ ll ಹರಿದ್ರ ಕುಂಕುಮ ಗಂಧ ll ಮರುಗ ಮಲ್ಲಿಗೆ ಮುಡಿಸಿ ll 1ll ಧೂಪಗಳನೆ ಹಾಕಿ ದೀಪವ ಹಚ್ಚಿಟ್ಟು ll ಶ್ರೀ ಪತಿ ಸತಿಗೀಗ ಪಾಕ ನಿವೇದಿಸಿ ll2ll ತೆಂಗಿನ ಫಲ […]
Yelli shri thulasiya vanavu
ಎಲ್ಲಿ ಶ್ರೀ ತುಳಸಿಯ ವನವುll ಅಲ್ಲೋಪ್ಪುವರು ಸಿರಿ ನಾರಾಯಣರು llಪ ll ಗಂಗೆ ಯಮುನೆ ಗೋದಾವರಿ ಕಾವೇರಿ ll ಕಂಗೊ ಳಿಸುವ ಮಣಿಕರ್ಣಿಕೆಯು ll ತುಂಗಭದ್ರೆ ಕೃಷ್ಣ ವೇಣಿ ತೀರ್ಥಗಳೆಲ್ಲ ll ಸಂಗಡಿಸುತ ವೃಕ್ಷ ಮೂಲದಲ್ಲಿರುವುವು ll1ll ಸರಸಿಜ ಭವ ಭವ ಸುರಪ ಪಾವಕ ll ಚಂದಿರ ಸೂರ್ಯ ಮೊದಲಾದವರು ll ಸಿರಿ ರಮಣ ನಾಜ್ಞೆಯಲಿ ಅಗಲದಂತೆ ll ತರು ಮಧ್ಯದಲಿ ನಿತ್ಯ ನೆಲೆಸಿಹರು ll2ll ಋಗ್ವೇದ ಯಜುರ್ವೇದ ಸಾಮ ಅಥರ್ವಣ ll ಅಗ್ಗಳಿಸುವ ವೇದ ಘೋಷಗಳು […]
Naarayana ninna nambide
ನಾರಾಯಣ ನಿನ್ನ ನಂಬಿದೆ ll ಲಕ್ಷ್ಮೀ ನಾರಾಯಣ ನಿನ್ನ ನಂಬಿದೆ ll ಪ ll ನಾನಾ ಯೋನಿಗಳಿಂದ ಬಂದೆನೋ ll ಮಾನ ತಾಳಲಾರದೆ ಬಲು ನೊಂದೆನೋ ll ದೀನರಕ್ಷಕ ಎನ್ನ ಗತಿ ಮುಂದೇನೋ ll ಮಾನ ದಿಂದಲಿ ಪಾಲಿಸುವಂಥ ದೊರೆ ನೀನು ll1ll ದಾಸರ ಮನ ಉಲ್ಲಾಸನೆ ಶ್ರೀಶಾ ಆಶ್ರಿತ ಜನರ ಪೋಷನೆ ll ಸಾಸಿರ ಅನಂತ ಮಹಿಮನೆ ಕ್ಲೇಶ ನಾಶ ಮಾಡಿಸೋ ಶ್ರೀನಿವಾಸನೆ ll2ll ರಂಗ ನಗರ ಉತ್ತುಂಗನೇ ಗಂಗಾ ಜನಕ ll ಗರುಡ ತುರಂಗನೇ […]
Hanuma -bheema -madhwa suvvaali
(ಅವತಾರತ್ರಯ ಸುವ್ವಾಲಿ) llಹನುಮ ಸುವ್ವಾಲಿll ಸುವ್ವಿ ಹನುಮಂತ ಸುವ್ವಿ ಸುವ್ವಿ ಭೀಮಸೇನ ಸುವ್ವಿll ಸುವ್ವಿ ಮಧ್ವರಾಯರಿಗೆ ಸುವ್ವಾಲಿ ll ಶ್ರೀ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿ ll ಹರುಷದಿಂದ ಭಾರತೀಶರನು ಭಜಿಸುವೆ ll 1 ll ಅಮರವರ್ಯರೆಲ್ಲ ಕ್ಷೀರಾಬ್ದಿಯಲ್ಲಿ ಮನೆಯಮಾಡಿ ll ಕಮಲೆಯೊಡನೆ ರಮಿಸುವ ಘನನ ಕಂಡರೋ ll2ll ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲ ll ರಕ್ಷಿಸೆಂದು ಪೊಗಳಿದರೆ ಕುಕ್ಷಿಲೋಲನ ll3ll ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದು ll ದಾನ ಮಾಡಿದೆಯೋ […]
ಜಯದೇವಿ ಜಯದೇವಿ ಜಯ ಪಾವನೆ ಗಂಗೆ ll ಜಯ ಜಯ ತ್ರಿಪಥ ಗಾಮಿನಿ ಜಯ ತುಂಗ ತರಂಗೆ ll ಆದಿಲಿ ಶ್ರೀ ಹರಿ ಕೋಮಲ ಪದ ನಖ ದಿಂದೋ ಗದು ll ಸಾಧಿನಿ ವಾರಿಜ ಭವನ ಕರ ಪಾತ್ರೆಗೆ ಬಂದು ll ಸಾದರ ದಿಂದ ಶಿವನ ಕೆಂಜೆಡೆ ಯೊಳು ನಿಂದು ll ಮೇದಿನಿ ಗಿಳಿದು ನೀ ಬಂದೆ ಭಗೀರಥ ನೃಪಗೊಲಿದು ll 1 ll ಕಾಶಿ ಪ್ರಯಾಗಾದಿ ನಿಂದು ಉದ್ಧರಿಸುತ ಕೆಲರ ll ಆಶೆಯ ಪೂರಿಸಲಾಗಿ ದಕ್ಷಿಣ […]
Ganga theerada mane nammadu
ಗಂಗಾ ತೀರದ ಮನೆ ನಮ್ಮದು ll ಕಾಶಿ ಬಿಂದು ಮಾಧವನಲ್ಲಿ ಇರುವುದು ಮನೆ ll ಪಂಚ ll ಆವಾವ ಕಾಲದ ಆನಂದ ಅರಮನೆ ತಾವರೆ ತಳಿತದ ನದಿಯ ಮನೆ ll ಆವಾಗ ಕಮಲಜ ಅವತರಿಸಿದ ಮನೆ ಆ ವೇದಂಗಳಿಗೆಲ್ಲ ತವರು ಮನೆ ll ಪಂಚ ll ಚಿತ್ರ ವಳಿದಲ್ಲಿಯ ಮನೆ ಚಿನ್ಮಯ ರೂಪದ ಮನೆ ನಿತ್ಯ ಲೋಕ ಗಳ ರಕ್ಷಿಸುವ ಮನೆ ಭಕ್ತ ಜನರ ನೆಲ್ಲ ಉದ್ದರಿಸಿದ ಮನೆ ಮುಕ್ತಿ ಸಾಯುಜ್ಯಕ್ಕೆ ಕಡೆಇಲ್ಲದ ಮನೆ ll ಪಂಚll […]