ಪೂಜೆ ಮಾಡೋಣ ಬನ್ನಿರೇ ll ಶ್ರೀ ತುಳಸಿಯ ll ಪೂಜೆ ಮಾಡೋಣ ಬನ್ನಿರೇ ll ಪ ll ಪೂಜೆ ಮಾಡೋಣ ಬನ್ನಿ ಲಾಜ ದೂರ್ವಗಳಿಂದ ll ಜಾಜಿ ಮಲ್ಲಿಗೆ ರಾಜೀವ ಪುಷ್ಪಗಳಿಂದ ll ಅ. ಪ ll ಹರದೇ ಶ್ರೀ ತುಳಸಿಗೆ ಸಾರಾವಳಿಯ ಉಡಿಸಿ ll ಹರಿದ್ರ ಕುಂಕುಮ ಗಂಧ ll ಮರುಗ ಮಲ್ಲಿಗೆ ಮುಡಿಸಿ ll 1ll ಧೂಪಗಳನೆ ಹಾಕಿ ದೀಪವ ಹಚ್ಚಿಟ್ಟು ll ಶ್ರೀ ಪತಿ ಸತಿಗೀಗ ಪಾಕ ನಿವೇದಿಸಿ ll2ll ತೆಂಗಿನ ಫಲ […]
Category: General
Naarayana ninna nambide
ನಾರಾಯಣ ನಿನ್ನ ನಂಬಿದೆ ll ಲಕ್ಷ್ಮೀ ನಾರಾಯಣ ನಿನ್ನ ನಂಬಿದೆ ll ಪ ll ನಾನಾ ಯೋನಿಗಳಿಂದ ಬಂದೆನೋ ll ಮಾನ ತಾಳಲಾರದೆ ಬಲು ನೊಂದೆನೋ ll ದೀನರಕ್ಷಕ ಎನ್ನ ಗತಿ ಮುಂದೇನೋ ll ಮಾನ ದಿಂದಲಿ ಪಾಲಿಸುವಂಥ ದೊರೆ ನೀನು ll1ll ದಾಸರ ಮನ ಉಲ್ಲಾಸನೆ ಶ್ರೀಶಾ ಆಶ್ರಿತ ಜನರ ಪೋಷನೆ ll ಸಾಸಿರ ಅನಂತ ಮಹಿಮನೆ ಕ್ಲೇಶ ನಾಶ ಮಾಡಿಸೋ ಶ್ರೀನಿವಾಸನೆ ll2ll ರಂಗ ನಗರ ಉತ್ತುಂಗನೇ ಗಂಗಾ ಜನಕ ll ಗರುಡ ತುರಂಗನೇ […]
ಜಯದೇವಿ ಜಯದೇವಿ ಜಯ ಪಾವನೆ ಗಂಗೆ ll ಜಯ ಜಯ ತ್ರಿಪಥ ಗಾಮಿನಿ ಜಯ ತುಂಗ ತರಂಗೆ ll ಆದಿಲಿ ಶ್ರೀ ಹರಿ ಕೋಮಲ ಪದ ನಖ ದಿಂದೋ ಗದು ll ಸಾಧಿನಿ ವಾರಿಜ ಭವನ ಕರ ಪಾತ್ರೆಗೆ ಬಂದು ll ಸಾದರ ದಿಂದ ಶಿವನ ಕೆಂಜೆಡೆ ಯೊಳು ನಿಂದು ll ಮೇದಿನಿ ಗಿಳಿದು ನೀ ಬಂದೆ ಭಗೀರಥ ನೃಪಗೊಲಿದು ll 1 ll ಕಾಶಿ ಪ್ರಯಾಗಾದಿ ನಿಂದು ಉದ್ಧರಿಸುತ ಕೆಲರ ll ಆಶೆಯ ಪೂರಿಸಲಾಗಿ ದಕ್ಷಿಣ […]
Ganga theerada mane nammadu
ಗಂಗಾ ತೀರದ ಮನೆ ನಮ್ಮದು ll ಕಾಶಿ ಬಿಂದು ಮಾಧವನಲ್ಲಿ ಇರುವುದು ಮನೆ ll ಪಂಚ ll ಆವಾವ ಕಾಲದ ಆನಂದ ಅರಮನೆ ತಾವರೆ ತಳಿತದ ನದಿಯ ಮನೆ ll ಆವಾಗ ಕಮಲಜ ಅವತರಿಸಿದ ಮನೆ ಆ ವೇದಂಗಳಿಗೆಲ್ಲ ತವರು ಮನೆ ll ಪಂಚ ll ಚಿತ್ರ ವಳಿದಲ್ಲಿಯ ಮನೆ ಚಿನ್ಮಯ ರೂಪದ ಮನೆ ನಿತ್ಯ ಲೋಕ ಗಳ ರಕ್ಷಿಸುವ ಮನೆ ಭಕ್ತ ಜನರ ನೆಲ್ಲ ಉದ್ದರಿಸಿದ ಮನೆ ಮುಕ್ತಿ ಸಾಯುಜ್ಯಕ್ಕೆ ಕಡೆಇಲ್ಲದ ಮನೆ ll ಪಂಚll […]
Bhagavatgeeta Saara – by Vyasarajaru
llಹರೇ ಶ್ರೀನಿವಾಸll llಶ್ರೀ ವ್ಯಾಸರಾಜರು ರಚಿಸಿದ ಶ್ರೀ ಭಗವದ್ಗೀತಾ ಸಾರll ಕೇಳಯ್ಯ ಎನ್ನ ಮಾತು ಪಾರ್ಥನೆ ಗೀತಾದಾರ್ಥನೆll ಕುರುಕ್ಷೇತ್ರದಿ ಎನ್ನವರು ಪಾಂಡವರುl ಪೇಳೋ ಸಂಜಯ ಏನು ಮಾಡುವರು ಕೂಡಿ l ಕೇಳಯ್ಯ ಅರಸನೆ ನೋಡಿ ಪಾಂಡವರ ಸೇನಾl ಮಾತನಾಡಿದ ನಿನ್ನ ಸುತ ದ್ರೋಣ ಗಿಂತುll ಕೇಳಿದ ಪಾರ್ಥನು ಕುರು ದಂಡ ರಣದಲಿ ಚಂಡ l ಗಾಂಢೀವ ಕರದಂಡll ಅಚ್ಯುತ ಪಿಡಿ ರಥ ನಡೆ ಮುಂದೆl ಬಹುತ್ವರದಿಂದl ನೋಡುವೆ ನೇತ್ರದಿಂದll ಗುರು ಹಿರಿಯ ಕೂಡ ಯಾಕೆಂದ l ಯುದ್ಧ […]