(ಅವತಾರತ್ರಯ ಸುವ್ವಾಲಿ) llಹನುಮ ಸುವ್ವಾಲಿll ಸುವ್ವಿ ಹನುಮಂತ ಸುವ್ವಿ ಸುವ್ವಿ ಭೀಮಸೇನ ಸುವ್ವಿll ಸುವ್ವಿ ಮಧ್ವರಾಯರಿಗೆ ಸುವ್ವಾಲಿ ll ಶ್ರೀ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿ ll ಹರುಷದಿಂದ ಭಾರತೀಶರನು ಭಜಿಸುವೆ ll 1 ll ಅಮರವರ್ಯರೆಲ್ಲ ಕ್ಷೀರಾಬ್ದಿಯಲ್ಲಿ ಮನೆಯಮಾಡಿ ll ಕಮಲೆಯೊಡನೆ ರಮಿಸುವ ಘನನ ಕಂಡರೋ ll2ll ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲ ll ರಕ್ಷಿಸೆಂದು ಪೊಗಳಿದರೆ ಕುಕ್ಷಿಲೋಲನ ll3ll ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದು ll ದಾನ ಮಾಡಿದೆಯೋ […]
Categories